ಲಕ್ಷದಿಂದ ಕೋಟಿಯ ಗಡಿದಾಟಿದ ನಟಿ ಶ್ರೀನಿಧಿ ಶೆಟ್ಟಿಯ ಸಂಭಾವನೆ! ಒಂದು ಸಿನೆಮಾಗೆ ಅದೆಷ್ಟು ಕೋಟಿ ಸಂಭಾವನೆ ಗೊತ್ತಾ? ಅಬ್ಬಬ್ಬಾ ತಲೆ ತಿರುಗಿ ಬಿಡುತ್ತೆ ನೋಡಿ!!

Actress Srinidhi Shetty Pays Cash Do you know how much money a movie pays? Watch Abbabba turn his head !!

0

ಸಿನಿಮಾ‌ ರಂಗದಲ್ಲಿ ಉಳಿಯಬೇಕು, ಬೇಡಿಕೆ ಪಡೆದುಕೊಳ್ಳಬೇಕು ಅಂದರೆ ಅದು ಸುಲಭದ ಮಾತಲ್ಲ, ಅದಕ್ಕೆ ಅದೃಷ್ಟ ಅನ್ನುವುದು ಇರಬೇಕು.‌ ಎಷ್ಟೋ ಮಂದಿ‌ ಕಷ್ಟ ಪಟ್ಟು ಸಿನಿಮಾ‌ ರಂಗದಲ್ಲಿ ಹೆಸರು ಮಾಡಬೇಕು ಎಂದು ಬಂದು ಒಂದೆರಡು ಸಿನಿಮಾ‌ ಮಾಡಿ ಅದರಲ್ಲಿ ಯಶಸ್ಸು ಕಾಣದೆ ವಾಪಾಸ್ ಹೋಗುತ್ತಾರೆ. ಇನ್ನು ಕೆಲವರಿಗೆ ಪ್ರಾರಂಭದಲ್ಲಿಯೇ ದೊಡ್ಡ ಬಜೆಟ್ ಸಿನಿಮಾ ಸಿಕ್ಕಿ ದೊಡ್ಡ ಮಟ್ಟದಲ್ಲಿ ಖ್ಯಾತಿ ಪಡೆಯುತ್ತಾರೆ.

ಕನ್ನಡದಲ್ಲಿ ರಶ್ಮಿಕಾ ಮಂದಣ್ಣ ಅವರು ಕಿರಿಕ್ ಪಾರ್ಟಿ ಸಿನಿಮಾ ಮಾಡಿದ್ದೇ ಮಾಡಿದ್ದು ಒಂದಾದರ ಮೇಲೆ ಒಂದರಂತೆ ಆಫರ್ ಗಳು ಬಂದು ಇದೀಗ ನಂಬರ್ ವನ್ ನಟಿಯಾಗಿ ಮಿಂಚುತ್ತಿದ್ದಾರೆ. ಅಷ್ಟೇ ಅಲ್ಲ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿದ್ದಾರೆ. ಇದೇ ರೀತಿ ಅನೇಕ ನಟ ನಟಿಯರು ಅದೃಷ್ಟ ಪರೀಕ್ಷೆಯಲ್ಲಿ ಪಾಸ್ ಆಗಿ ಮಿಂಚಿದ್ದಾರೆ. ಅದೇ ರೀತಿ ಇದೀಗ ಮಿಂಚುತ್ತಿರುವ ನಟಿ ಅಂದರೆ ಅದು ಶ್ರೀ ನಿಧಿ ಶೆಟ್ಟಿ.

ಮೊದಲ ಸಿನಿಮಾವೇ ಬ್ಯಾಂಗ್ ಆಗಿ ಸಿಕ್ಕ ಲಕ್ಕಿ ನಟಿ ಅಂದರೆ ತಪ್ಪಾಗಲ್ಲ. ರಾಕಿಂಗ್ ಸ್ಟಾರ್ ಯಶ್ ಜೊತೆ ಕೆ ಜಿ ಎಫ್ ಸಿನಿಮಾದಲ್ಲಿ ನಟಿಸಿ ಇದೀಗ ಸ್ಟಾರ್ ನಟಿಯಾಗುವತ್ತ ಹೊರಟಿದ್ದಾರೆ.‌ ಕೆ ಜಿ ಎಫ್ ಸಿನಿಮಾ ಸೂಪರ್ ಡೂಪರ್ ಆಗುತ್ತಿದ್ದಂತೆ ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ. ಶ್ರೀ ನಿಧಿ ಶೆಟ್ಟಿಯವರು ಅಭಿನಯಿಸಿದ ಮೊದಲ ಸಿನಿಮಾ‌‌ ಕೆಜಿಎಫ್ -1, ಕೆಜಿಎಪ್ -2, ಇದೀಗ ಕೋಬ್ರಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೀಗ ಸಿನಿಮಾ ಹಿಟ್ ಆಗುತ್ತಿದ್ದಂತೆ ತಮ್ಮ ಸಂಭಾವನೆ ಕೂಡ ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗಿದೆ.

ಹೌದು, ಇದೀಗ ಟಾಕ್ ಆಫ್ ದಿ ಟೌನ್ ಶ್ರೀ ನಿಧಿ ಶೆಟ್ಟಿಯವರ ಸಂಭಾವನೆ ಕುರಿತೇ ಆಗಿದೆ.ಆದರೆ ಶ್ರೀನಿಧಿ ಕೇವಲ ಮೂರು ಸಿನಿಮಾಗಳನ್ನು ಮಾಡಿರುವ ಕಾರಣ ಅವರ ಅಧಿಕೃತ ಸಂಭಾವನೆ ಎಷ್ಟು ಎನ್ನುವುದು ಹೊರಬಂದಿಲ್ಲ. ಆದರೆ ಇದೀಗ ಶ್ರೀನಿಧಿ ತೆಲುಗು ನಟಿಯರ ಪೈಕಿ ಅತಿ ಹೆಚ್ಚು ಸಂಭಾವನೆಯನ್ನು ಕೇಳುತ್ತಿದ್ದಾರೆ ಎನ್ನುವ ಸುದ್ದಿ ಮಾತ್ರ ತೆಲುಗು ಚಿತ್ರರಂಗದಲ್ಲಿ ಹರಿದಾಡುತ್ತಿದೆ.

ಅದರಲ್ಲೂ ರಶ್ಮಿಕಾ ಮಂದಣ್ಣ ಹಾಗೂ ಪೂಜಾ ಹೆಗ್ಡೆ ಅವರಿಗಿಂತ ಹೆಚ್ಚಿನ ಸಂಭಾವನೆ ಕೇಳುತ್ತಿದ್ದಾರೆ ಅನ್ನುವ ವಿಚಾರ ಎಲ್ಲರಿಗೂ ಶಾಕ್ ಆಗಿದೆ. ಹೌದು, ಸೌತ್ ಸಿನಿಮಾರಂಗದಲ್ಲಿ ಇದೀಗ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ರಶ್ಮಿಕಾ ಮತ್ತು ಪೂಜಾ ಹೆಗ್ಡೆ ಮುಂಚೂಣಿಯಲ್ಲಿ ಇದ್ದಾರೆ. ಮೂಲಗಳ ಪ್ರಕಾರ ನಟಿ ರಶ್ಮಿಕಾ ಮಂದಣ್ಣ ಒಂದು ಸಿನಿಮಾಗೆ 4 ಕೋಟಿ ಸಂಭಾವನೆಯನ್ನು ಪಡೆದರೆ, ಪೂಜಾ ಹೆಗ್ಡೆ 3 ಕೋಟಿ ಸಂಭಾವನೆ ಪಡೆಯುತ್ತಿದ್ದಾರಂತೆ.

ಆದರೆ ಇವರಿಬ್ಬರನ್ನು ಬೀಟ್ ಮಾಡಲು ನಟಿ ಶ್ರೀನಿಧಿ ಶೆಟ್ಟಿ ಸಿದ್ಧವಾಗಿದ್ದಾರೆ. ಈ ಇಬ್ಬರಿಗಿಂತಲೂ ಹೆಚ್ಚಿನ ಸಂಭಾವನೆಯ ಬೇಡಿಕೆಯನ್ನು ಶ್ರೀನಿಧಿ ನಿರ್ಮಾಪಕರ ಮುಂದೆ ಇಡುತಿದ್ದಾರಂತೆ. ಇದನ್ನು ಕೇಳಿ ನಿರ್ಮಾಪರು ಶಾಕ್ ಆಗಿದ್ದಾರೆ ಎನ್ನಲಾಗಿದೆ. ಇದೀಗ ಶ್ರೀ ನಿಧಿ ಶೆಟ್ಟಿ ತಮಿಳಿನಲ್ಲಿ ನಟ ವಿಕ್ರಮ್ ಜೊತೆಗೆ ‘ಕೋಬ್ರಾ’ ಸಿನಿಮಾದಲ್ಲಿ ನಟಿಸಿದ್ದಾರೆ. ಮುಂದೆ ಕೆಲವು ಸಿನಿಮಾಗಳು ಅವರ ಕೈ ನಲ್ಲಿ ಇದ್ದು ಅವು ಯಾವುದು ಅನ್ನುವುದು ಮಾತ್ರ ತಿಳಿದು ಬಂದಿಲ್ಲ.‌

ಇನ್ನು ಇವರ ಸಂಭಾವನೆ ಮೊತ್ತ ಕೇಳಿ ಕೆಲ ನಿರ್ಮಾಪರು ಅವರ ಜೊತೆ ಸಿನಿಮಾ ಮಾಡುವುದು ಕೂಡ ಡೌಟ್ ಅನ್ನಲಾಗಿದೆ. ಶ್ರೀ ನಿಧಿ ಶೆಟ್ಟಿಯವರು ಇನ್ನೂ ಬೆಳೆಯಬೇಕಾಗಿದೆ, ಹಾಗಿರುವಾಗ ಇಷ್ಟು ಬೇಗ ಸಂಭಾವನೆ ಹೆಚ್ಚು ಮಾಡಿಕೊಂಡು ತಪ್ಪು ಮಾಡಿದ್ದಾರೆ ಎಂದು ಅನೇಕರು ಅಭಿಪ್ರಾಯ ಪಟ್ಟಿದ್ದಾರೆ. ಈ ಬಗ್ಗೆ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.

 

Leave A Reply

Your email address will not be published.